ಪರಿಚಯ

ರಾಜ್ಯದ ಶೇ.55 ರಷ್ಟು ಜನಸಂಖ್ಯೆಯನ್ನು ಹೊಂದಿರುವ ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಸರ್ಕಾರದ ಹಂತದಲ್ಲಿ ಒಂದು ಪ್ರತ್ತೇಕ ಹಿಂದುಳಿದ ವರ್ಗಗಳ ಸಚಿವಾಲಯವನ್ನು ಸೃಜಿಸುವಂತೆ ಮತ್ತು ಪ್ರತ್ಯೇಕ ಸಚಿವರನ್ನು ನೇಮಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಲಹೆ ನೀಡಿದ ಮೇರೆಗೆ ಆದೇಶ ಸಂಖ್ಯೆ: ಸಿಆಸುಇ 394 ಸಅಸೇ 2012 ದಿನಾಂಕ: 04.08.2012ರ ಪ್ರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯೆಂಬ ಪ್ರತ್ಯೇಕ ಸಚಿವಾಲಯವನ್ನು ಸೃಜಿಸಲಾಗಿದೆ. ಈ ಸಚಿವಾಲಯದ ಮುಖ್ಯಸ್ಥರಾಗಿ ಭಾರತೀಯ ಆಡಳಿತ ಸೇವೆಯ ಅಧಿಕಾರಿಯೊಬ್ಬರು ಕಾರ್ಯದರ್ಶಿ/ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಿಗೆ ಸಚಿವಾಲಯದಲ್ಲಿ ಓರ್ವ  ಉಪ ಕಾರ್ಯದರ್ಶಿ, ಇಬ್ಬರು ಅಧೀನ ಕಾರ್ಯದರ್ಶಿ ಹಾಗೂ ಮೂವರು ಶಾಖಾಧಿಕಾರಿಗಳು ಇದ್ದು, ಇತರೆ ಸಿಬ್ಬಂದಿ ವರ್ಗದವರು ಕಛೇರಿ ಕಾರ್ಯದಲ್ಲಿ ನೆರವಾಗುವರು.