ಆಧಾರ್ ನೋಂದಣಿ ಮಾಡುವ ಬಗ್ಗೆ

     ಆಧಾರ್ ನೋಂದಣಿ ಉಚಿತ:

  • ನೀವು ಆಧಾರ್ ನೋಂದಣಿ ಮಾಡಿಸಲು ಗುರುತು ಮತ್ತು ವಿಳಾಸ ಪುರಾವೆಗಳೊಂದಿಗೆ ಕರ್ನಾಟಕದ ಯಾವುದೇ ನಗರದಲ್ಲಿರುವ ಮಾನ್ಯತೆ ಪಡೆದ ಆಧಾರ ನೋಂದಣಿ ಕೇಂದ್ರಕ್ಕೆ ತೆರಳಿ ಯುಐಡಿಎಐ ನಿಗದಿ ಪಡಿಸಿರುವ 18 ಗುರುತು ಪುರಾವೆಗಳಲ್ಲಿ ಒಂದು ಗುರುತು ಪುರಾವೆ ಮತ್ತು 35 ವಿಳಾಸ ಪುರಾವೆಗಳಲ್ಲಿ ಯಾವುದಾದರು ಒಂದು ವಿಳಾಸ ಪುರಾವೆಯನ್ನು ನೀಡಬೇಕಿರುತ್ತದೆ. ಚುನಾವಣ ಗುರುತು ಚೀಟಿ, ಪಡಿತರ ಚೀಟಿ, ಪಾಸ್ಪೋಪೋರ್ಟ್ ಮತ್ತು ಚಾಲನಾ ಪರವಾಸಗಿ ಸಾಮಾನ್ಯವಾಗಿ ಗುರುತು ಮತ್ತು ವಿಳಾಸ ಪುರಾವೆಗಳಾಗಿದ್ದು, ಇನ್ನುಳಿದ ಗುರುತು ಮತ್ತು ವಿಳಾಸ ಪುರಾವೆಗಳಿಗೆ ಪಟ್ಟಿಗಾಗಿ ಇಲ್ಲಿ ಕ್ಲಿಕ್ ಮಾಡಿ.

  • ಪ್ಯಾನ್ ಕಾರ್ಡ್ ಮತ್ತು ಸರ್ಕಾರಿ ಗುರುತಿನ ಚೀಟಿಗಳನ್ನು ಗುರುತು ಪುರಾವೆಯಾಗಿ ಮತ್ತು ಇತ್ತೀಚಿನ 3 ತಿಂಗಳೊಳಗಿನ ವಿದ್ಯುತ್ ಬಿಲ್, ನೀರಿನ ಬಿಲ್ ಮತ್ತು ಟೆಲಿಫೋನ್ ಬಿಲ್ ಗಳನ್ನು ವಿಳಾಸ ಪುರಾವೆಗೆ ನೀಡಬಹುದಾಗಿದೆ, ಯಾವುದೆ ಪುರಾವೆ ಇಲ್ಲದಿದ್ದಲ್ಲಿ ಪತ್ರಾಂಕಿತ ಅಧಿಕಾರಿಗಳ/ತಹಶೀಲ್ದಾರವರಿಂದ ಅವರ ಲೆಟರ್ ಹೆಡ್ ನಲ್ಲಿ ಗುರುತು ಮತ್ತು ವಿಳಾಸ ಪೂರವೆಯನ್ನು ಪಡೆಯಬಹುದಾಗಿದೆ. ವಿಳಾಸ ಪುರಾವೆಯನ್ನು ಕ್ಷೇತ್ರದ ಸಂಸತ್ ಸದಸ್ಯರು/MLA/ಪತ್ರಾಂಕಿತ ಅಧಿಕಾರಿ/ತಹಶಿಲ್ದಾರ/ಗ್ರಾಮ ಪಂಚಾಯಿತಿ ಅಧಿಕಾರಿಯವರಿಂದ ಪಡೆಯಬಹುದಾಗಿದೆ.

  • ಒಂದು ಕುಟುಂಬದ ಸದಸ್ಯನಿಗೆ ವಿಳಾಸ ಪುರಾವೆ ಇಲ್ಲದಿದ್ದಲ್ಲಿ ಕುಟುಂಬದ ಮುಖ್ಯಸ್ಥನ ವಿಳಾಸ ಪುರಾವೆ ಮತ್ತು Proof of relation UIDAI ಸೂಚಿಸಿರುವ 8 POR ದಲ್ಲಿ ಯಾವುದಾದರೊಂದು POR ನೀಡಬಹುದಾಗಿದೆ.

  • ಯಾವುದೆ ದಾಖಲೆಗಳು ಇಲ್ಲದಿದ್ದಲ್ಲಿ ಪರಿಚಯಕಾರರ ಮೂಲಕ ಆಧಾರ್ ನೋಂದಣಿ ಮಾಡಿಸ ಬಹುದಾಗಿದ್ದು ಪರಿಚಯಕಾರು ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಂದ ನೇಮಿಸಲ್ಪಟ್ಟಿರುತ್ತಾರೆ, ನೋಂದಣಿ ಕೇಂದ್ರದಲ್ಲಿ ಆಧಾರ್ ಅರ್ಜಿಯನ್ನು ಪಡೆದು ವೈಯಕ್ತಿಕ ವಿವರಗಳನ್ನು ಬರೆದು ಅರ್ಜಿಯನ್ನು ಸಲ್ಲಿಸಿ ಫೋಟೊ, ಬೆರಳಚ್ಚು ಮತ್ತು ಐರಿಸ್ ಸ್ಕಾನ್ ಮಾಡಲಾಗುತ್ತದೆ. ವೈಯಕ್ತಿಕ ವಿವರಗಳನ್ನು ಕಂಪ್ಯೂಟರ್ ಪರದೆಯಮೆಲೆ ವೀಕ್ಷಿಸಿ ಖಚಿತ ಪಡಿಸಿಕೊಂಡು ನಂತರ ತಾತ್ಕಾಲಿಕ ನೋಂದಣಿ ಸಂಖ್ಯೆಯ ಸ್ವೀಕೃತಿ/ರಸೀದಿಯನ್ನು ಆಪರೇಟರ್ ನಿಂದ ಪಡೆಯಬಹುದು.

  • ಒಂದು ಬಾರಿ ಆಧಾರ್ ನೋಂದಣಿ ಮಾಡಿಸಿದರೆ ಪದೆ ಪದೆ ನೋಂದಣಿ ಮಾಡಿಸುವಂತಿಲ್ಲ. ಒಂದು ವೇಳೆ ನೋಂದಣಿ ಮಾಡಿಸಿದಲ್ಲಿ ನಕಲು ಎಂದು ಪರಿಗಣಿಸಲಾಗುತ್ತದೆ, ನಿಮ್ಮ ನೋಂದಣಿ ಸಫಲವಾದಲ್ಲಿ ಒಂದು ಆಧಾರ್ ಸಂಖ್ಯೆ ನಿಮ್ಮ ವಿಳಾಸಕ್ಕೆ 60-90 ದಿನದೊಳಗೆ ಅಂಚೆ ಮೂಲಕ ಕಳುಹಿಸಲಾಗುತ್ತದೆ.

  • ನೋಂದಣಿ ಮಾಡಿದ ನಂತರ ನೋಂದಣಿ ಕೇಂದ್ರದ ಮೇಲ್ವಿಚಾರಕರು ಗುಣಮಟ್ಟ ಪರಿಶೀಲನೆ ಮಾಡಿ ನೋಂದಾಯಿತ ದತ್ತಾಂಶವನ್ನು ದಾಖಲಾತಿ ಏಜೆನ್ಸಿಯವರಿಗೆ UIDAI ಕಳುಹಿಸಲಾಗುತ್ತದೆ, ದತ್ತಾಂಶವನ್ನು CIDR ನಲ್ಲಿ ವಿವಿದ ರೀತಿಯ Screening ಮತ್ತು ಪರಿಶಿಲನೆ ಮಾಡಿ ದತ್ತಾಂಶದಲ್ಲಿ ನಕಲು ಇಲ್ಲವೆಂದು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಇದಲ್ಲದೆ ಆಪರೇಟರ್/ ಮೇಲ್ವಿಚಾಕರ/ಪರಿಚಯಕಾರ/ದಾಖಲಾತಿ ಏಜೆನ್ಸಿ ಯಾರೆಂದು ಪರಿಶೀಲಿಸಿದ ನಂತರ ದತ್ತಾಂಶ ಡಿ-ಡ್ಯುಪ್ಲಿಕೇಷನ್ ಮಾಡುವಿಕೆಗೆ ಹೊಗುತ್ತದೆ.

  • ಮೇಲಿನ ಯಾವುದೆ ಹಂತದಲ್ಲಿ ತಪ್ಪುಗಳಿದ್ದ ಸಂರ್ಭದಲ್ಲಿ ಅಂತಹ  ಪ್ಯಾಕೆಟ್ ತಡೆಹಿಡಿಯಲಾಗುತ್ತದೆ. ಉದಾಹರಣೆಗೆ 50 ವರ್ಷ ವಯಸ್ಸಿನ ವ್ಯಕ್ತಿಯ ಹೆಸರಲ್ಲಿ ಮಗುವಿನ ಫೋಟೊವಿದ್ದರೆ ವಯಸ್ಸು ಲಿಂಗ ಇತ್ಯಾದಿ ಯಾವುದೆ ದತ್ತಾಂಶದಲ್ಲಿ ತಪ್ಪುಗಳಿದ್ದರೆ ಅಂತಹ ಪ್ಯಾಕೆಟ್ ಗಳನ್ನು ನಿರಾಕರಿಸಿ ಮತ್ತೊಮ್ಮೆ ದಾಖಲಾತಿ ಮಾಡುವಂತೆ ಸೂಚಿಸಲಾಗುವುದು. ಸಹಮತ ಪಡೆದ ನೋಂದಣಿಗೆ ಆಧಾರ್ ಸಂಖ್ಯೆಯನ್ನು ಸಿದ್ಧಪಡಿಸಿ ಭಾರತೀಯ ಅಂಚೆಯ ಮೂಲಕ ಮುದ್ರಿಸಿ. ನಿವಾಸಿಗಳಿಗೆ 3-5 ವಾರಗಳ ಅವಧಿಯಲ್ಲಿ ತಲುಪಿಸಲಾಗುತ್ತದೆ. ಆಧಾರ್ ನೋಂದಣಿ NPR ಮೂಲಕವಾಗಿದ್ದಲ್ಲಿ ಪರಿಶೀಲನೆ ಪ್ರಕ್ರಿಯೆ ಸ್ವಲ್ಪ ವಿಳಂಭವಾಗಿದ್ದು ಅದು, LRUR(Local Register of Resident) ಮೂಲಕ ಪರಿಶೀಲಿಸಲಾಗುತ್ತದೆ.