ಕೆಆರ್ ಡಿಹೆಚ್ ಎಂದರೇನು?

          ಸರ್ಕಾರದ ವಿವಿಧ ಇಲಾಖೆಗಳ ಭೌಗೋಳಿಕವಾಗಿ ನಕಲಿ/ಖೋಟಾ ನಮೂದುಗಳಿಲ್ಲದ ಪರಿಶುದ್ಧವಾದ ಫಲಾನುಭವಿಗಳ ವಿವರಗಳನ್ನು ಅವರ ಆಧಾರ್ ಸಂಖ್ಯೆಯೊಂದಿಗೆ ಸೇರ್ಪಡೆ ಮಾಡುವುದರಿಂದ ಸಂಪರ್ಕ ಹೊಂದಿದ ಡಾಟಾ ಬೇಸ್  ಹೊಂದಲು ಕರ್ನಾಟಕ ಸರ್ಕಾರದ ಎಲ್ಲಾ ಇಲಾಖೆಗಳಿಗೆ KRDH- (ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ ) ಸಮಗ್ರ ವೇದಿಕೆಯನ್ನು  ಅಭಿವೃದ್ಧಿಗೊಳಿಸಿದೆ. ಇಲಾಖೆಗಳ ದತ್ತಾಂಶದಿಂದ ನಕಲಿ ಫಲಾನುಭವಿಗಳನ್ನು ಹೊರತುಪಡಿಸಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳು ಸಿಗುವಂತೆ ಮಾಡುವುದು ಇದರ ಉದ್ದೇಶವಾಗಿದೆ.

          ವೇದಿಕೆಯ ಮುಖಾಂತರ ಇಲಾಖೆಗಳ ಯೋಜನೆಯಲ್ಲಿ ನಿಯಮಾನುಸಾರ ಯಾವುದೆ ಫಲಾನುಭವಿಯ ಅರ್ಹತ ಮೌಲ್ಯಮಾಪನ ಮಾಡಬಹುದಾಗಿದೆ. ಉದಾ: BPL ಕಾರ್ಡ್ ಹೊಂದಿರುವ ವ್ಯಕ್ತಿಯು ವಾಹನವನ್ನು ಹೊಂದುವಂತಿಲ್ಲ ಹಾಗೂ ಒಬ್ಬ ವಿದ್ಯಾರ್ಥಿ ಎರಡು ಅಥವಾ ಎರಡಕ್ಕಿಂತ ಹೆಚ್ಚು ವಿದ್ಯಾರ್ಥಿ ವೇತನ ಪಡೆಯುವಂತಿಲ್ಲ.

 KRDH ಏನು ಮಾಡುತ್ತದೆ.

ಕರ್ನಾಟಕ ರೆಸಿಡೆಂಟ್ ಡೆಟಾ ಹಬ್ ಹಲವು ಸೇವೆಗಳನ್ನು (Online ಮುಖಾಂತರ ಮತ್ತು ವೆಬ್ ಸೇವೆಗಳ ಮೂಲಕ) ಇಲಾಖಾ ಸಿಬ್ಬಂದಿಗಳಿಗೆ ಗುಣಮಟ್ಟದವನ್ನು ಅನುಲಕ್ಷಿಸಿ ಮಾಡಲು ಅನುವುಮಾಡಿಕೊಟ್ಟಿದೆ.

ಆಧಾರ್ ಹೆಸರು ಹಾಗೂ ಫಲಾನುಭವಿಯ ಹೆಸರನ್ನು ಜೋಡಿಸಲು ನವೀನ ರೀತಿಯ Fuzzy Score ಅನ್ನು ಬಳಸಲಾಗಿದೆ. ಇದರಿಂದ ಸಂಪೂರ್ಣ ಹೊಂದಾಣಿಕೆಯಾದ ಭಾಗಶಃ ಹೊಂದಾಣಿಕೆಯಾದ ಹಾಗು ಹೊಂದಾಣಿಕೆಯಾಗದ ಮೂರು ವಿಭಾಗಗಳನ್ನು ಮಾಡಲಾಗುತ್ತದೆ.

 ಕೆಆರ್ ಡಿಎಚ್ ಏಕೆ?

ಸಹಜವಾಗಿಯೇ ಪ್ರತ್ಯೇಕವಾಗಿ ಇರುವ ಇಲಾಖಾ ಮಾಹಿತಿಯ ಗುಣಾಧಾರಿತ ದತ್ತಾಂಶವಾಗಿಸಿ ಎಲ್ಲ ಇಲಾಖೆಗಳಿಗೂ ಸಮೀಕರಿಸುವುದಕ್ಕೆ ಕೆಆರ್ ಡಿಎಚ್ ಪ್ರೋತ್ಸಾಹಿಸುತ್ತದೆ. ದಿಶೆಯಲ್ಲಿ, ಆಧಾರ್ ಜನಸಂಬಂಧೀ ಮಾಹಿತಿಯನ್ನು ಪಡೆದು ಸೇವೆಗಳನ್ನು ಇಂದೀಕರಿಸಿಕೊಳ್ಳಲು ಇಲಾಖೆಗಳಿಗೆ ಇಕೆವೈಸಿ ಸೇವೆಗಳನ್ನು ಒದಗಿಸುತ್ತದೆ, ಇದರಿಂದಾಗಿ ನಿವಾಸಿಗಳ ಮಾಹಿತಿಯು ಕೇಂದ್ರಸ್ಥಾನದಲ್ಲಿ ಇಂದೀಕರಣಗೊಂಡಾಗ ಅವುಗಳು ಎಲ್ಲಾ ಇಲಾಖೆಗಳ ದತ್ತಾಂಶಗಳೂ ಇಂದೀಕರಣಗಳ್ಳುವಂತೆ ಕೆಆರ್ ಡಿಎಚ್ ವೇದಿಕೆಯಲ್ಲಿ ತಾಂತ್ರಿಕ ಸೌಲಭ್ಯವಿದೆ. ಹೀಗೆ ನಾಗರೀಕರ ಯಾವುದೇ ವಿಳಾಸ, ದೂರವಾಣಿ ಸಂಖ್ಯೆ, ಮುಂತಾದವುಗಳಲ್ಲಿ ಆಗುವ ಬದಲಾವಣೆಗಳು ಇಲಾಖಾ ದತ್ತಾಂಶಗಳಲ್ಲಿ ಯಾವಾಗಲೂ ಇಂದೀಕರಣಗೊಂಡಿರುವುದು ಖಚಿತಪಡಿಸಿಕೊಳ್ಳುತ್ತದೆ. ಆಧಾರ್   ಫಲಾನುಭವಿಗಳ ದತ್ತಾಂಶಗಳಲ್ಲಿ ಖೊಟ್ಟಿ ಮಾಹಿತಿಗಳಿದ್ದರೆ ಅವುಗಳನ್ನು ಹೊರತುಪಡಿಸಿ, ಉದ್ದೇಶಿತ ಸ್ವೀಕೃತರಿಗೆ ಸೇವೆಗಳನ್ನು ಸಮರ್ಪಕವಾಗಿ ಒದಗಿಸುವ ಎಲ್ಲಾ ಇಲಾಖೆಗಳ ಏಕೀಕೃತ ವೇದಿಕೆಯೊಂದನ್ನು ಕಲ್ಪಿಸುವುದೇ ಕೆಆರ್ ಡಿಎಚ್ ಒಟ್ಟಾರೆ ಉದ್ದೇಶವಾಗಿದೆ.

ಕೆಆರ್ ಡಿಎಚ್ ವೇದಿಕೆಯ ವಿಶೇಷ ಗುಣಲಕ್ಷಣಗಳೆಂದರೆ:-

 1. ಫಲಾನುಭವಿಗಳ ಪರಸ್ಪರ ಸಂಪರ್ಕಗೊಳಿಸುವುದು.(ಮ್ಯಾಪಿಂಗ್)
 2. ಆಧಾರ್ ಒದಗಿಸುವ ಎಲ್ಲಾ ಸೇವೆಗಳನ್ನೂ ಕೆಆರ್ ಡಿಎಚ್ ಒಂದೇ ವೇದಿಕೆಯಡಿಯಲ್ಲಿ ಒದಗಿಸುವುದರ ಮೂಲಕ ಇಲಾಖೆಗಳಿಗೆ ಒಂದೇ ಸೂರಿನಡಿ ಎಲ್ಲ ಸೌಲಭ್ಯಗಳೂ ದೊರಕಿದಂತಾಗುತ್ತದೆ.
 3. ಇಲಾಖೆಯೊಂದಕ್ಕೆ ಕೆಆರ್ ಡಿಎಚ್ ಸೇವೆಗಳನ್ನು ಪಡೆಯಲು ಅನುಕೂಲ ಕಲ್ಪಿಸಿಕೊಡುವುದಕ್ಕೋಸ್ಕರ ವೆಬ್ ಸೇವೆಗಳು ತಮ್ಮದೇ ಆದ ಪ್ರಸ್ತುತವಿರುವ ಅನ್ವಯಿಕೆಯೊಡನೆ ಸಮಗ್ರಗೊಳಿಸುವುದರ ಮೂಲಕ ಇಲಾಖಾ ಕ್ಷೇತ್ರ ಸಿಬ್ಬಂದಿಗಳಿಗೆ ಪದೇ ಪದೇ ತರಬೇತಿಯ ಅವಶ್ಯಕತೆಯನ್ನು ಕಡಿಮೆ ಮಾಡುತ್ತದೆ.

ಪ್ರಸ್ತುತ ಸ್ಥಿತಿ ಹಾಗೂ ಕೆಆರ್ ಡಿಎಚ್ ಬಳಕೆದಾರರು

ಇದುವರೆಗೆ, ರಾಜ್ಯ ಸರ್ಕಾರದ 19 ಇಲಾಖೆಗಳು (25 ಯೋಜನೆಗಳು) ಅಂದಾಜು 12 ಕೋಟಿ ಫಲಾನುಭವಿಗಳ ಮಾಹಿತಿಯನ್ನು ಕೆಆರ್ ಡಿಎಚ್ ನೊಂದಿಗೆ ಪರಿಷ್ಕರಣೆಗಾಗಿ ವಿನಿಮಯ ಮಾಡಿರುತ್ತಾರೆ. ಕೆಆರ್ ಡಿಎಚ್ ಅನ್ನು ಸರ್ಕಾರಿ ಇಲಾಖೆಗಳು ಹಾಗೂ ನಿವಾಸಿಗಳು ಲಭ್ಯವಿರುವ ಸೇವೆಗಳನ್ನೂ ಪಡೆಯಲು ಬಳಸುತ್ತಾರೆ. ಜೊತೆಗೆ, ಕೆಆರ್ ಡಿಎಚ್ ದೃಢೀಕರಣ, -ಕೆವೈಸಿ ಹಾಗೂ -ಸೈನ್ (ಇನ್ನೂ ಪ್ರಗತಿಯಲ್ಲಿದೆ) ಸೇವೆಗಳನ್ನು ವ್ಯಕ್ತಿಯೊಬ್ಬರನ್ನು ದೃಢೀಕರಿಸಲು (ಸರ್ಕಾರಿ ಅಥವಾ ಸರ್ಕಾರೇತರ) ಬಳಸಬಹುದಿರುತ್ತದೆ.

ಅನ್ವಯಿಕೆಗಳ ಹಾಗೂ ವೆಬ್ ಸೇವೆಗಳ ರೂಪದಲ್ಲಿರುವ ಕೆಳಕಂಡ ಸೇವೆಗಳನ್ನು ಪ್ರಸ್ತುತ 19 ಇಲಾಖೆಗಳು ತಮ್ಮ 25 ಯೋಜನೆಗಳಿಗೆ ಬಳಸುತ್ತಿವೆ.

 1. ಆನ್ ಲೈನ್ ಆಧಾರ್ ಸೀಡಿಂಗ್ ಹಾಗೂ ಬಲ್ಕ್ ಸೀಡಿಂಗ್

 2. ಮಾಹಿತಿ ಶುದ್ಧೀಕರಣ ಸೇವೆಗಳು

 1. ಆಧಾರ್ ಜನಸಂಬಂಧೀ ವೆಬ್ ಸೇವೆಗಳು

 2. ಆಧಾರ್ ದೃಢೀಕರಣ ಸೇವೆಗಳು

 3. ಇಕೆವೈಸಿ ಸೇವೆಗಳು

 4. ಕ್ರಾಸ್-ರೆಫರೆನ್ಸ್ ಸೇವೆಗಳು

 5. ಇಲಾಖೆಗಳಲ್ಲಿ ಹಿರಿಯ ಅಧಿಕಾರಿಗಳು ಹಾಗೂ ಕಾರ್ಯನಿರ್ವಾಹಕರುಗಳಿಗೆ, ವರದಿ ಸಿದ್ಧಪಡಿಸುವಿಕೆ ಮತ್ತು ಡ್ಯಾಷ್ ಬೋರ್ಡು ಲಭ್ಯತೆ.

 6. ಡಿಜಿಟಲ್ ಸೈನಿಂಗ್ (-ಸೈನ್) ಸೇವೆಗಳು  ಇನ್ನೂ ಪ್ರಗತಿಯಲ್ಲಿದೆ.

 7. ಡಿಬಿಟಿ ವ್ಯಾಲಿಡೇಷನ್ ಹಾಗೂ ಲೆಕ್ಕಪತ್ರ ಸೇವೆಗಳು ಇನ್ನೂ ಪ್ರಗತಿಯಲ್ಲಿವೆ.

 8. ಡಿಜಿ-ಲಾಕರ್ ಹಾಗೂ ದತ್ತಾಂಶ ಹಂಚಿಕೆ ಸೇವೆಗಳು ಇನ್ನೂ ಪ್ರಗತಿಯಲ್ಲಿವೆ.
 Visit: https://krdh.karnataka.gov.in/