ಕರ್ನಾಟಕ ಸರ್ಕಾರವು ಇ-ಆಡಳಿತ ಕೇಂದ್ರವನ್ನು (ಸಿ.ಇ.ಜಿ) ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆ.ಸು) ವ್ಯಾಪ್ತಿಯ ಇ-ಆಡಳಿತ ಇಲಾಖೆಯ ಅಡಿಯಲ್ಲಿ ಸ್ಥಾಪಿಸಿದೆ ಹಾಗೂ ಕರ್ನಾಟಕ ಸಹಕಾರ ಸಂಘ ನೋಂದಣಿ ಕಾಯ್ದೆ, 1960 ರ ಅಡಿಯಲ್ಲಿ ನೋಂದಣಿಯಾಗಿದೆ. ಕರ್ನಾಟಕ ರಾಜ್ಯ ವಿಸ್ತೃತ ಜಾಲ ಯೋಜನೆಯನ್ನು (ಕೆಸ್ವಾನ್) ಭಾರತ ಸರ್ಕಾರದ ಸಹಾಯದೊಂದಿಗೆ ವಿಶ್ವಾಸಾರ್ಹ ಹಾಗೂ ಸುರಕ್ಷಿತ ಜಾಲ ಸಂಪರ್ಕ ನೀಡುವುದಲ್ಲದೇ ರಾಜ್ಯದಾದ್ಯಂತ ಬಳಕೆದಾರ ಇಲಾಖೆಗಳ ಬೇಡಿಕೆಯ ಅನುಸಾರ ಬ್ಯಾಂಡ್ ವಿಡ್ತ್ ಉನ್ನತೀಕರಿಸಿ ಒದಗಿಸುವುದಕ್ಕಾಗಿ ಡಿಸೆಂಬರ್ 2009ರಲ್ಲಿ ಪ್ರಾರಂಭಿಸಿದೆ. ಕೆಸ್ವಾನ್ ಯೋಜನೆಯ ಸೇವಾದಾರರುಗಳ ನೆಟ್ ವರ್ಕ್ ಮತ್ತು ಬ್ಯಾಂಡ್ ವಿಡ್ತ್ ಮಿತಿಯೊಳಗೆ ಎಂ.ಪಿ.ಎಲ್.ಎಸ್. ತಂತ್ರಜ್ಞಾನ ಬಳಸಿ ಲ್ಯಾನ್ ಮತ್ತು ವ್ಯಾನ್ ಸೇವೆಗಳನ್ನು ಒದಗಿಸುವ ಸಲುವಾಗಿ ರಚಿತವಾಗಿದೆ. ವಿಶ್ವಾಸಾರ್ಹ ದೋಷರಹಿತ ವಿಡಿಯೋ, ವಾಯ್ಸ್ ಹಾಗೂ ಡ್ಯಾಟಾ ಸಂವಹನ ಸೇವೆಗಳನ್ನು ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಕಲ್ಪಿಸುವ ಗುರಿಯನ್ನು ಯೋಜನೆಯು ಹೊಂದಿದೆ.
ಈ ಯೋಜನೆಯು ಸಾರ್ವಜನಿಕ-ಖಾಸಗೀ ಪಾಲುದಾರಿಕೆ (ಪಿಪಿಪಿ) ಮಾದರಿಲ್ಲಿದೆ. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿನ ನಿಯಂತ್ರಣ ಕೇಂದ್ರಕ್ಕೆ (ಎನ್.ಸಿ.ಆರ್., ಡಿ.ಸಿ.ಆರ್. ಮತ್ತು ಟಿ.ಸಿ.ಆರ್) 176 ಪಾಪ್ ಗಳು (ರಾಜ್ಯ, 27 ಜಿಲ್ಲೆಗಳು, 148 ತಾಲ್ಲೂಕುಗಳು) 3 ಹಂತಗಳಲ್ಲಿ ಸಂವಹಿಸುತ್ತವೆ. ರಾಜ್ಯ, ಜಿಲ್ಲಾ ಮತ್ತು ತಾಲ್ಲೂಕುಗಳಲ್ಲಿನ ವಿವಿಧ ಸರ್ಕಾರಿ ಕಛೇರಿಗಳು ಸಂಬಂಧಪಟ್ಟ ಕೆಸ್ವಾನ್ನ ಪಾಪ್ ಗಳಿಗೆ ಸಂಪರ್ಕ ಹೊಂದಿರುತ್ತವೆ. ಪ್ರಸ್ತುತ, ಮುಖ್ಯಮಂತ್ರಿಗಳ ಕಛೇರಿ, ರಾಜ್ಯಪಾಲರ ಕಛೇರಿ, ಉಚ್ಛನ್ಯಾಯಾಲಯ, ಪೊಲೀಸ್, ಜುಡಿಷಿಯಲ್ ನ್ಯಾಯಾಲಯಗಳು ಹಾಗೂ ಕಾರಾಗೃಹಗಳಲ್ಲಿ, 62 ಇಲಾಖೆಗಳಲ್ಲಿ, ಖಜಾನೆಗಳಲ್ಲಿ, ಮುದ್ರಾಂಕ ಮತ್ತು ನೋಂದಣಿ, ಸಾರಿಗೆ, ಕೃಷಿ, ಶಿಕ್ಷಣ, ಆರೋಗ್ಯ, ಆಹಾರ ಮತ್ತು ನಾಗರೀಕ ಸರಬರಾಜು, ಮುನಿಸಿಪಲ್ ಆಡಳಿತ, ಇತ್ಯಾದಿ 4000ಕ್ಕೂ ಹೆಚ್ಚು ಕಛೇರಿಗಳಿಗೆ ಸಂಪರ್ಕ ಒದಗಿಸಿದೆ.
ಭಾರತ ಸರ್ಕಾರದ ಎನ್.ಐ.ಐ. 2.0 ಯೋಜನೆಯಡಿಯಲ್ಲಿ ಗ್ರಾಮಪಂಚಾಯಿತಿ ಮಟ್ಟದವರೆಗಿನ ಎಲ್ಲಾ ಕಛೇರಿಗಳಿಗೂ ಕೆಸ್ವಾನ್ ಯೋಜನೆಯ ವಿಸ್ತರಣೆಯು ಪ್ರಗತಿಯಲ್ಲಿದೆ. ಇಂಟರ್ನೆಟ್ ಪ್ರೋಟೋಕಾಲ್ ಆಧಾರಿತ ಫೋನನ್ನು (ವಿ.ಓ.ಐ.ಪಿ) ವಿವಿಧ ಇಲಾಖೆಗಳ ಆಡಳಿತ ಅಧಿಕಾರಿಗಳಿಗೆ ಒದಗಿಸಲಾಗಿದೆ. ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯವನ್ನು ಎಲ್ಲಾ 176 ತಾಲ್ಲೂಕು ಕೇಂದ್ರಗಳಿಗೂ ವಿಸ್ತರಿಸಲಾಗಿದೆ.
ಎಂ.ಪಿ.ಎಲ್.ಎಸ್. ಟೆಕ್ನಾಲಜಿ ಆಧಾರಿತ ಎ.ಎಸ್.ಆರ್, ಡಿ.ಎಸ್.ಆರ್. ಮತ್ತು ಟಿ.ಎಸ್.ಆರ್.ಗಳು ಪರಸ್ಪರ ಬ್ಯಾಂಡ್ ವಿಡ್ತ್ ಸಂಪರ್ಕ ಹೊಂದಿ ಸ್ವಯಂಚಾಲಿತ ಗುಣಲಕ್ಷಣವುಳ್ಳ ಸೆಲ್ಪ್ ಹೀಲಿಂಗ್ ರಿಂಗ್ ಟೆಕ್ನಾಲಜಿಯು ಕಾರ್ಯ ನಿರ್ವಹಿಸುತ್ತದೆ. ಕೆಸ್ವಾನ್ ಯೋಜನೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯು “ಬೂಟ್” ಮಾದರಿಯ ಮೇಲೆ ಆಯ್ದ System Integrator ತಂಡವು ಅವಿರತವಾಗಿ ಕಾರ್ಯ ನಿರ್ವಹಿಸುತ್ತದೆ. ಯೋಜನಾ ನಿರ್ದೇಶಕರು, ಕೆಸ್ವಾನ್ ಅವರ ನೇತೃತ್ವದ ಇ-ಆಡಳಿತ ಕೇಂದ್ರದ ಪ್ರತ್ಯೇಕ ತಂಡವೊಂದು ಕೆಸ್ವಾನ್ ಯೋಜನೆಯ ಕಾರ್ಯಕ್ಷಮತೆಯನ್ನು ಉಸ್ತುವಾರಿ ಮಾಡಿ, ಸಮಸ್ಯೆಗಳಿದ್ದಲ್ಲಿ, ಸಮಯೋಚಿತವಾಗಿ ಬಗೆಹರಿಸುವಲ್ಲಿ ಸೇವಾದಾರರೊಡನೆ ಕಾರ್ಯ ನಿರ್ವಹಿಸುತ್ತದೆ. ಕೆಸ್ವಾನ್ ನ ಸಹಾಯವಾಣಿಯು (‘ಹೆಲ್ಪ್ ಡೆಸ್ಕ್’) 24/7 ಕಾರ್ಯ ನಿರ್ವಹಿಸುತ್ತಿದ್ದು ಕರ್ನಾಟಕ ರಾಜ್ಯದಾದ್ಯಂತ ಬಳಕೆದಾರ ಇಲಾಖೆಗಳಿಗೆ ನಿರ್ವಹಿತ ಜಾಲ ಸೇವೆಗಳನ್ನು ಒದಗಿಸುತ್ತದೆ. ಅದರಿಂದಾಗಿ, ಕೆಸ್ವಾನ್ ಯೋಜನೆಯ ಅಪ್ ಟೈಂ ನಲ್ಲಿ ಶೇಕಡಾ 99.5% ಗಿಂತಲೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗಿದೆ.
ಡಿ.ಸಿ.ಆರ್.ಗಳಿಗೂ ಮತ್ತು ಎಸ್.ಸಿ.ಆರ್.ಗಳ ನಡುವಿನ ಬ್ಯಾಂಡ್ ವಿಡ್ತ್ ಸಂಪರ್ಕದಿಂದಾಗಿ ಬಿ.ಎಸ್.ಎನ್.ಎಲ್ ಮತ್ತು ಎನ್.ಕೆ.ಎನ್. (ಎನ್.ಐ.ಸಿ)ರವರುಗಳಿಗೆ ಪರ್ಯಾಯ ಸಂಪರ್ಕ ಒದಗಿಸಿದಂತಾಗಿದೆ. ಮುಂದುವರೆದು, ಎರಡು ರೀತಿಯ ಟಿ.ಎಸ್.ಪಿ.ಗಳಿಂದ ರಾಜ್ಯದ ೆಲ್ಲಾ ಡಿ.ಸಿ.ಆರ್. ಮತ್ತು ಟಿ.ಎಸ್.ಆರ್. ಪಾಪ್ ಗಳು ಶೇಕಡಾ 100% ಅಪ್ ಟೈಮ್ ಸಾಧಿಸಲು ಇ-ಆಡಳಿತ ಕೇಂದ್ರವು ಡ್ಯುಯಲ್ ಬ್ಯಾಂಡ್ ವಿಡ್ತ್ ಸಂಪರ್ಕಕ್ಕೆ ಯೋಜಿಸಿದೆ.
ಮಾಹಿತಿ ತಂತ್ರಜ್ಞಾನದ ಹಬ್ ಎನಿಸಿಕೊಂಡಿರುವ ಕರ್ನಾಟಕ ರಾಜ್ಯವು ಬೃಹತ್ ಇ-ಆಡಳಿತ ಅನ್ವಯಿಕೆಗಳನ್ನು ಕ್ಷೇತ್ರ ಮಟ್ಟದವರೆಗೆ ವಿಸ್ತರಿಸುವಲ್ಲಿ ಸಫಲವಾಗಿದೆ. ಬೃಹತ್ ಸಂಖ್ಯೆಯಲ್ಲಿ ಸರ್ಕಾರದಿಂದ ನಾಗರೀಕರಿಗೆ (ಜಿ2ಸಿ), ಸರ್ಕಾರದಿಂದ ಸರ್ಕಾರಕ್ಕೆ (ಜಿ2ಜಿ) ಮತ್ತು ಸರ್ಕಾರದಿಂದ ಉದ್ದಿಮೆಗೆ (ಜಿ2ಬಿ) ಯೋಜನೆಗಳ ಉಪಕ್ರಮಿಕೆಗಳು ಕೆಸ್ವಾನ್ ಯೋಜನೆಯನ್ನು ಅವಲಂಬಿಸಿವೆ.
Search Bandwidth Details
Add Bandwidth
Software VC Client