ಯೋಜನೆಯ ಧ್ಯೇಯವೆಂದರೆ “ಸಂಪರ್ಕದಲ್ಲಿ ಸರಕಾರ”. ಇದರಿಂದಾಗಿ ನಾಗರೀಕರೊಂದಿಗಿನ ಸರ್ಕಾರದ ಪ್ರತಿಕ್ರಿಯೆಯಲ್ಲಿ ಪರಿವರ್ತನೆ.
ಈ ಯೋಜನೆಯ ಒಟ್ಟಾರೆಯ ಉದ್ದೇಶಗಳೆಂದರೆ:-
ಎಲ್ಲಾ ಸರ್ಕಾರದ ಇಲಾಖೆಗಳು/ ಸಾರ್ವಜನಿಕ ವಲಯದ ಘಟಕಗಳಿಗೆ “ಪ್ಲಗ್ ಅಂಡ್ ಕನೆಕ್ಟ್” ವಾತಾವರಣ ಸೃಷ್ಟಿಸಿ ಬೇಡಿಕೆಗೆ ಅನುಗುಣವಾಗಿ ಬ್ಯಾಂಡ್ ವಿಡ್ತ್ ಒದಗಿಸುವುದು.
ಬಹಳ ವಿಶ್ವಾಸಾರ್ಹ, ಸದೃಢ ಹಾಗೂ ಸುರಕ್ಷಿತ ಸಂವಹನ ಪ್ರಕ್ರಿಯೆ.
ಜಾಲಕ್ಕಾಗಿ ವಿಶ್ವಾಸಾರ್ಹ ಹಾಗೂ ಸುರಕ್ಷಿತ ಆಧಾರ
ದತ್ತಾಂಶ ಸಂರಕ್ಷಣೆಗೆ ಡಿ.ಆರ್. ಸೈಟ್ ನಿರ್ಮಾಣ
ಸರ್ಕಾರದ ಇ-ಆಡಳಿತ ಅನ್ವಯಿಕೆಗಳನ್ನು ಕೇಂದ್ರೀಕೃತ ಗೊಳಿಸುವುದರಿಂದ ಒಟ್ಟಾರೆ ನಿರ್ವಹಣಾ ವೆಚ್ಚದಲ್ಲಿ ಇಳಿತ.
ಸರ್ಕಾರಕ್ಕೆ ಇಂಟ್ರಾನೆಟ್ ಸೌಲಭ್ಯ ಒದಗಿಸಿ ಪ್ರಭಾವಕಾರಿ ಸಂವಹನಕ್ಕೆ ಕಾಗದರಹಿತ ವಾತಾವರಣಕ್ಕೆ ಅನುಕೂಲಿಸುವುದು.
ನಾಗರೀಕರಿಂದ ಸರ್ಕಾರಕ್ಕೆ, ಔದ್ಯಮಿಕ ಸಂಸ್ಥೆಗಳಿಂದ ಸರ್ಕಾರಕ್ಕೆ ಆಗುವ ಸರ್ಕಾರದ ಸೇವೆಗಳ ವಿದ್ಯುನ್ಮಾನ ವಿತರಣೆಯ ಅನುಕೂಲ.
ರಾಜ್ಯದ ಎಲ್ಲಾ ಇ-ಆಡಳಿತ ಅನ್ವಯಿಕೆಗಳಿಗೆ ಸಂಪರ್ಕ
ಸಾಮಾನ್ಯ ಹಾಗೂ ಯಾವುದೇ ರೀತಿಯ ವಿಪತ್ತುಗಳ ಸಂದರ್ಭಗಳಲ್ಲಿ ದರಮೌಲ್ಯವುಳ್ಳ ಹಾಗೂ ಪರ್ಯಾಯ ಮಾರ್ಗದ ಸಂವಹನದ ಪೂರೈಕೆ.
ಸರ್ಕಾರಿ ಕಾರ್ಯಪ್ರವೃತ್ತರೊಡನೆ ಸರ್ಕಾರದ ಸಂವಾದಕ್ಕಾಗಿ ಸಾಮಾನ್ಯ ಮತ್ತು ಯಾವುದೇ ರೀತಿಯ ವಿಪತ್ತಿನ ಸಂದರ್ಭಗಳಲ್ಲಿಯೂ ವಿಡಿಯೋ ಕಾನ್ಫರೆನ್ಸ್ ಅನುಕೂಲದ ಸೃಜನೆ
ಕರ್ನಾಟಕದ ಯಾವುದೇ ಸ್ಥಳದಿಂದ ನಾಗರೀಕರು ಸರ್ಕಾರದ ಸೇವೆಗಳನ್ನು ಪಡೆಯಲು ಸಂಪರ್ಕಯುಕ್ತ ಪರಿಸರವೊಂದನ್ನು ಹೊಂದುವ ಮೂಲಕ ಈ ಯೋಜನೆಯು ಡಿಜಿಟಲ್ ವಾತಾವರಣಕ್ಕೆ ಸಂಪರ್ಕ ಸೇತುವೆ ಆಗಲಿದೆ. ಈ ಯೋಜನೆಯಿಂದ ಆಂತರಿಕ-ಸರ್ಕಾರಿ ವಹಿವಾಟುಗಳಲ್ಲಿ ಸಂವಹನದ ವೇಗ ಮತ್ತು ದಕ್ಷತೆಯು ಹೆಚ್ಚುವ ನಿರೀಕ್ಷೆ ಇದೆ.